ಮಹಾಸಾದ್ವಿ ಹೆಳವನಕಟ್ಟೆ ಗಿರಿಯಮ್ಮ

  • ಮುಕ್ತಾ ಪೈ ಸಂಶೋಧನಾ ವಿದ್ಯಾರ್ಥಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು
Keywords: ದಾಸ ಸಾಹಿತ್ಯ, ವಚನ ಸಾಹಿತ್ಯ, ಹೆಳವನಕಟ್ಟೆ ಗಿರಿಯಮ್ಮ, ಕೀರ್ತನೆಗಳು

Abstract

ನಮ್ಮ ಕನ್ನಡನಾಡು ಸಂಗೀತ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ಶಿವಶರಣೆಯರು ತಮ್ಮ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದ ಹಾಗೆ ಹರಿದಾಸರು ಕೂಡ ತಮ್ಮ ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ದಾಸರು ವೈಯುಕ್ತಿಕವಾಗಿ ತಮ್ಮ ಮೋಕ್ಷದ ಸ್ವಾರ್ಥವನ್ನು ಬಯಸದೇ ಇಡೀ ಸಮಾಜವನ್ನು ಮೋಕ್ಷದ ಕಡೆಗೆ ಕರೆದೊಯ್ಯುವ ಪ್ರಯತ್ನವನ್ನು ಮಾಡಿದ್ದಾರೆ. ದಾಸರೆಲ್ಲರೂ ತಮ್ಮ ಇ಼ಷ್ಟದೇವರ ಅಂಕಿತದಿAದ ತಮ್ಮ ಕೀರ್ತನೆಗಳನ್ನು ರಚಿಸಿ, ಪ್ರತಿಯೊಬ್ಬ ಮನುಷ್ಯನಿಗೆ ದೇವರಲ್ಲಿ ನಂಬಿಕೆ ಇರಬೇಕು ಎಂದು ಸಾರಿ ಸಾರಿ ಹೇಳಿದರು. ಇವರ ಕೀರ್ತನೆಗಳಲ್ಲಿ ಹೆಚ್ಚಾಗಿ ಶ್ರೀ ಹರಿಯ ಸ್ತುತಿಗಳನ್ನು ನಾವು ಕಾಣಬಹುದಾಗಿದೆ. ಹರಿದಾಸ ಸಾಹಿತ್ಯದಲ್ಲಿ ಕೆಲವು ಮಹಿಳಾ ಹರಿದಾಸರು ನಕ್ಷತ್ರಗಳಂತೆ ಮಿಂಚಿದ್ದಾರೆ. ಇವರಲ್ಲಿ ಹೆಳವನಕಟ್ಟೆ ಗಿರಿಯಮ್ಮನ ಪಾತ್ರ ಪ್ರಮುಖವಾದುದು. ಅಂತಹ ಮಹಿಳಾ ಕೀರ್ತನಕಾರರಲ್ಲಿ ಹೆಳವನಕಟ್ಟೆ ಗಿರಿಯಮ್ಮನವರು ತಮ್ಮ ಅಮೂಲ್ಯವಾದ ಕೃತಿಗಳನ್ನು ರಚಿಸಿ ಬಹು ಎತ್ತರದ ಸ್ಥಾನಕ್ಕೇರಿದವರು.

Published
2024-10-28
Statistics
Abstract views: 57 times
PDF downloads: 29 times