ಕನ್ನಡ ಸಾಹಿತ್ಯದಲ್ಲಿ ಬುದ್ಧನ ಪರಿಕಲ್ಪನೆಗಳು

  • ಅರುಣ್ ಕುಮಾರ್ ಎ.ವೈ ಸಂಶೋಧನಾರ್ಥಿ, ಸಹಾಯಕ, ಸಹಪ್ರಾಧ್ಯಪಕರು,ಕನ್ನಡ, ಜೈನ್ ವಿ.ವಿ. ಬೆಂಗಳೂರು
  • ಡಾ.ಶಿವಕುಮಾರಡಿ ಸಿ ಮಾರ್ಗದರ್ಶಕರು, ಪ್ರಾಧ್ಯಪಕರು, ನ್ಯೂ.ಅ.ರಾ.ಪ.ಕಾಲೇಜು.ಬೆಂಗಳೂರು
Keywords: ಬುದ್ಧನಕುರಿತ ಕೃತಿಗಳು, ಬುದ್ಧನ ಪರಿಕಲ್ಪನೆಗಳು, ಕನ್ನಡ ಸಾಹಿತ್ಯ

Abstract

ಬುದ್ಧನ ಹುಟ್ಟು ಮತ್ತು ಬುದ್ಧನ ಬದುಕು ಮಾನವ ಪ್ರಪಂಚದಲ್ಲಿ ಮಹತ್ವದಅಂಶವಾಗಿದೆ. ಬುದ್ಧನ ತತ್ವಗಳು, ಬುದ್ಧನಜೀವನದರ್ಶನವುಇಡೀ ವಿಶ್ವಕ್ಕೆದೊರಕಿರುವಅತ್ಯಮೂಲ್ಯವಾದದ್ದಾಗಿದೆ. ಇಂದು ಬೌದ್ಧಧರ್ಮವನ್ನುಕುರಿತಂತೆ, ಬುದ್ಧನನ್ನು ಒಳಗೊಂಡAತೆ ಸಂಶೋಧನೆಗಳು, ಅಧ್ಯಯನಗಳು ನಡೆಯುತ್ತಲೆಇದೆ. ಬುದ್ಧನನ್ನುಕುರಿತುಎಲ್ಲಾ ಭಾಷ ಸಾಹಿತ್ಯದಲ್ಲೂಕಾವ್ಯ, ಕಥೆ, ಕಾದಂಬರಿ, ನಾಟಕಗಳು, ರಚನೆಗೊಂಡಿವೆ. ಈ ದಿಸೆಯಲ್ಲಿ ಗಮನಿಸುವಾಗ ಕನ್ನಡ ಸಾಹಿತ್ಯದಲ್ಲಿ ಬುದ್ಧನನ್ನುಕುರಿತಂತೆ ವಿವಿಧ ನೆಲೆಗಟ್ಟಿನಲ್ಲಿ ಮತ್ತು ಬಹು ಆಯಾಮಗಳಲ್ಲಿ ಸಂಶೋಧನೆಗಳು ಅಧ್ಯಯನಗಳು ನಡೆಯುತ್ತಲೆಯಿದೆ. ಇದು ಪ್ರಮುಖವಾಗಿ ವಿಶ್ವ ವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ಮತ್ತು ಅಧ್ಯಯನಗಳು ನಡೆಯುತ್ತಿರುವುದು ಗಮನಿಸಬೇಕಾದಗಮನಾರ್ಹವಾದ ಸಂಗತಿಯಾಗಿದೆ. ಬುದ್ಧನು ಕಾಲವಾದ ನಂತರವೂ ಅನೇಕ ಬಿಕ್ಕುಗಳು ಬುದ್ಧನ ವಿಚಾರಧಾರೆಗಳನ್ನು ಜಗತ್ತಿನಾದ್ಯಂತ ಸಾರಿದರು. ಇದಕ್ಕೆ ಪೂರಕವಾಗಿ ಅಶೋಕ ಚಕ್ರವರ್ತಿಯನ್ನೆ ನಿದರ್ಶನವಾಗಿ ಹೆಸರಿಸಬಹುದು. ರಾಜನಾದ ಅಶೋಕ ಚಕ್ರವರ್ತಿಯು ಯುದ್ಧನೀತಿಗಳನ್ನು ನಿರಾಕರಿಸುವ ಮೂಲಕ ಅಹಿಂಸೆಗೆ ಹೆಚ್ಚು ಒತ್ತುಕೊಟ್ಟು, ಜೀವಪರವಾದ ಮೌಲ್ಯಗಳನ್ನು ತಳೆದದ್ದು ಬಹಳ ಮಹತ್ವವಾದದ್ದು. ಇಂದು ಬುದ್ಧನಕುರಿತಅಧ್ಯಯನವನ್ನು ಒಳಗೊಂಡAತೆ ಚರ್ಚೆಗೆ ಒಳಪಡಿಸಿದಾಗ, ಕನ್ನಡ ಸಾಹಿತ್ಯಕ್ಷೇತ್ರವು ಪ್ರಮುಖವಾದ ಪಾತ್ರವನ್ನು ವಹಿಸಿದೆ. ಪ್ರಸ್ತುತ ಈ ಲೇಖನದಲ್ಲಿಕನ್ನಡ ಸಾಹಿತ್ಯದೊಳಗೆ ಬುದ್ಧನ ಪರಿಕಲ್ಪನೆಗಳು ಹೇಗೆ ಒಳಗೊಂಡಿದೆ ಎಂಬುದನ್ನುಅಧ್ಯಯನಕ್ಕೆ ಒಳಪಡಿಸುವುದು ಪ್ರಮುಖಉದ್ದೇಶವಾಗಿದೆ.

Published
2024-10-28
Statistics
Abstract views: 46 times
PDF downloads: 21 times