ಹರಿದಾಸ ಸಾಹಿತ್ಯದ ಉಗಮ ಮತ್ತು ವಿಕಾಸ
Abstract
ಕರ್ನಾಟಕದಲ್ಲಿ ಮಧ್ಯಕಾಲೀನ ಕನ್ನಡ ಸಾಹಿತ್ಯವು ಸಾಂಸ್ಕೃತಿಕ ಇತಿಹಾಸದ ದೃಷ್ಟಿಯಿಂದ ಅತ್ಯಂತ ಮಹತ್ವ ಪೂರ್ಣವಾದ ಕಾಲಘಟ್ಟವಾಗಿದೆ. ನಡುಗನ್ನಡ ಸಾಹಿತ್ಯವು ಪ್ರಮುಖವಾಗಿ ವಚನ ಸಾಹಿತ್ಯ, ಹರಿದಾಸ ಸಾಹಿತ್ಯ ಪರಂಪರೆಯ ತನ್ನದೇ ಆದ ತಾತ್ವಿಕ ನಿಲುವುಗಳೊಂದಿಗೆ ಕನ್ನಡ ಸಾಹಿತ್ಯ ಚರಿತ್ರೆಯ ಪ್ರಮುಖ ಘಟ್ಟವಾಗಿದೆ. ಶಾಸ್ತç ಸಾಹಿತ್ಯಗಳಿಗೆ ಪ್ರಮುಖ ಆಧಾರ- ‘ಮಾನವನ ಬದುಕು-ಬದುಕುವ ಬಗೆ”೧ ಎಂಬುದಾಗಿದೆ. ಪುರಂದರದಾಸರು ಹೇಳುವ “ಮಾನವ ಜನ್ಮ ದೊಡ್ಡದು,ಇದನು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ”, “ಈಸಬೇಕು ಇದ್ದು ಜಯಿಸಬೇಕು” ‘ಚಿಂತನಾ ಲಹರಿಯು ಮೂಲ ಬೇರುಗಳನ್ನು ‘ಶಾಸ್ತç ಸಾಹಿತ್ಯ’ದಲ್ಲಿ ಮನಗಾಣಬಹುದು. ಆದ್ದರಿಂದ ಹರಿದಾಸರಲ್ಲಿರುವ ಬಾಳಿನ ಚಿಂತನೆಗಳ ಮೂಲ ನೆಲೆಗಟ್ಟು, ವ್ಯಕ್ತಿತ್ವ ವಿಚಾರಗಳಿಗೆ ಸ್ಫೂರ್ತಿ- ಭಾರತೀಯ ಶಾಸ್ತçದಲ್ಲಿನ ತಳಹದಿಯ ವಿಚಾರವೇ ಆಗಿದೆ. ಹರಿದಾಸ ಸಾಹಿತ್ಯವು ಮುಖ್ಯವಾಗಿ ಭಕ್ತಿ ಪ್ರಧಾನವಾದ, ಸಂಗೀತಲಯವನ್ನು ಪ್ರತಿಬಿಂಬಿಸುವ, ಹರಿಯನ್ನು ಭಾವಪೂರ್ಣವಾಗಿ ಸ್ಮರಣೆಯನ್ನಾಗಿಸಿಕೊಂಡ ಪರಂಪರೆಯಾಗಿದೆ. ಹರಿದಾಸ ಸಾಹಿತ್ಯವು ಕೇವಲ ಭಕ್ತಿ ಪ್ರಧಾನವಾಗಿರದೆ ಮೌಲ್ಯಗಳ ಮಹತ್ವವನ್ನು ಬಿತ್ತುವುದರ ಜೊತೆಗೆÀ ಸಾಮಾಜಿಕ ಬದುಕಿನಲ್ಲಿರುವ ಅನೇಕ ಮೌಢ್ಯಗಳನ್ನು, ಅಂಧಕಾರಗಳನ್ನು, ಸಮಾಜದ ಓರೆ-ಕೋರೆಗಳನ್ನು ತಿದ್ದುವ ಕಾರ್ಯವನ್ನು ಪ್ರಮುಖವಾಗಿ ಮಾಡಿದೆ. ಇದಕ್ಕಾಗಿ ಹರಿದಾಸರು ಸಮಾಜದ ಆಡುಭಾಷೆಯಲ್ಲಿ ತಮ್ಮ ಅಂತರAಗದ ಭಕ್ತಿ-ಭಾವಗಳನ್ನು ಅಭಿವ್ಯಕ್ತಿಗೊಳಿಸಿದರು. ಹರಿದಾಸರು ಆಯ್ದುಕೊಂಡದ್ದು ಸಂಗೀತ ಲಯಗಳನ್ನೊಳಗೊಂಡ ಪ್ರಕಾರಗಳಾದ-ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು, ಮುಂಡಿಗೆಗಳು, ವೃತ್ತನಾಮಗಳು, ದಂಡಕಗಳು ಮುಂತಾದ ರಚನೆಗಳು. ಇವೆಲ್ಲವೂ ಒಂದೇ ಕಾಲದಲ್ಲಿ ಪಂಡಿತರನ್ನು, ಪಾಮರರನ್ನು, ಜನ ಸಾಮಾನ್ಯರನ್ನು ಏಕ ಕಾಲದಲ್ಲಿ ಆಕರ್ಷಿಸುತ್ತಾ ಬಂದಿರುವ ವಿಶಿಷ್ಟವಾದ ದಾಸಸಾಹಿತ್ಯದ ವಿಶೇಷವಾದ ರಚನಾ ಪ್ರಕಾರಗಳು. ಹರಿದಾಸ ಸಾಹಿತ್ಯವು ಅಚಲಾನಂದರಿAದ, ನರಹರಿತೀರ್ಥರಿಂದ ಮೊದಲುಗೊಂಡು ಶ್ರೀಪಾದರಾಜರಿಂದ ಪ್ರಮುಖವಾಗಿ ತಳಹದಿಯನ್ನು ಪಡೆದು ಅನೇಕ ದಾಸಶ್ರೇಷ್ಠರಿಂದ ಜನಪ್ರಿಯವಾಯಿತು. ಅಡಿಟಿಪ್ಪಣಿ-೧.ದಾಸಸಾಹಿತ್ಯದ ಉಗಮ ಮತ್ತು ವಿಕಾಸದ ವಿಚಾರದಲ್ಲಿ ದಾಸಸಾಹಿತ್ಯ ಕೈಪಿಡಿ.ಸಂ.ಡಾ.ಸ್ವಾಮಿರಾವ್ ಕುಲಕರ್ಣಿ,ಡಾ.ಶಿವಾನಂದ.-ಪ್ರಸಾರAಗ ಕನ್ನಡ ವಿಶ್ವವಿದ್ಯಾಲಯ ಹಂಪಿ-೨೦೨೨.ಪು-೫೮
Copyright (c) 2024 ಜ್ಯೋತಿ ಶಂಕರ್ಸ, ಮಾರುತಿ ಜಿ

This work is licensed under a Creative Commons Attribution-ShareAlike 4.0 International License.